Monday, November 12, 2018

ಇದೇಕೆ ಹೀಗೆ?

ಕೆಲವೆಡೆ ಮೂರು ಹೊತ್ತು ಉಣ್ಣಲು
ಚಿನ್ನದ ಬಟ್ಟಲು.
ಇನ್ನು ಕೆಲವೆಡೆ
ಮುರಿದ ಕೈ ತೂಗುತ್ತಿದೆ
ದಾರಿದ್ರ್ಯದ ತೊಟ್ಟಿಲು .
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಕೆಲವರು ಎಲ್ಲ ಬಲ್ಲವರು
ತಲೆ ಸರಸ್ವತಿಯ ಮನೆ,
ಜ್ಞಾನ,ಚಿಂತನೆ ವಿಚಾರ.
ನಾವು-ನೀವೋ , ಏನು ಬಲ್ಲಿರಿ ?
ಅಜ್ಞಾನ, ಚಿಂತೆ, ಸಾಮಾನ್ಯ ವ್ಯವಹಾರ.
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಆಗೋ ಅಲ್ಲಿ ನೋಡಿ,
ಆ ಸೌಂದರ್ಯ,ಮೈ ಬಣ್ಣ,
ಅಪರಂಜಿ , ಹುಣ್ಣಿಮೆಯ ಜಾತ್ರೆ.
ಇಗೋ ಇತ್ತ ಕಣ್ಣು ಹಾಯಿಸಿ,
ತೂಕವಿಲ್ಲದ ದೇಹಕ್ಕೆ
ಬಣ್ಣಕ್ಕೆಲ್ಲಿ ಕಾಂತಿ.
ಕಣ್ಣ ಬೊಂಬೆಯ ಸುತ್ತದ ಬಿಳಿಯು
ಬದಲಾಗುತ್ತಿದೆ,
ಬದುಕು ನಡುಇರುಳ ಯಾತ್ರೆ.
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಅಲ್ಲಿ ದಷ್ಟ -ಪುಷ್ಠ ಮಾಂಸಖಂಡಗಳು ,
ತಿಂದುದನು ಕರಗಿಸುವುದಕೆ
ಓಡುವ ಜನ.
ಪ್ರದರ್ಶನ ,ಮೆಡಲ್ ಗಳು
ಅದಕೊಂದು ಪ್ರಮಾಣ ಪತ್ರ .
ಇಲ್ಲಿ ಎಲುಬುಗಳ ಪ್ರದರ್ಶನ ,
ಹೊತ್ತನ್ನದ ಊಟಕ್ಕೆ
ಮುಗಿಯುವುದು ದಿನದ ಗಡಿಯಾರದ ಓಟ,
ಜೊತೆಗೆ ಸವೆದ ಸವೆದ ಚಪ್ಪಲಿ
ಚಿಂದಿ ಬಟ್ಟೆಗಳು ಮಾತ್ರ.
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಒಂದೆಯಾದರೆ ಸೃಷ್ಟಿಯ ಮೂಲ 
ಎಂತಿಣಿತು ವೈರುದ್ಯ ?
ಇಷ್ಟೊಂದು ವೈವಿಧ್ಯ ?
ಎಳೆದು ಬಿಟ್ಟಿದ್ದರೆ ಆತ,
ಸಮಾನತೆಯ ಗೆರೆ . 
ಹುಟ್ಟುತಿತ್ತೆ ಪ್ರಶ್ನೆ 
ಇದೇಕೆ ಹೀಗೆ ?,ಇದೇಕೆ ಹೀಗೆ ?.
ಎಲ್ಲದಕ್ಕೂ ಅದರದೆ ಇತಿಮಿತಿ 
ಸೃಷ್ಟಿಕರ್ತನ ಪರಿಮಿತಿ . 




                                                                                                           ಸುಕೇಶ್ ಪೂಜಾರಿ 





Monday, November 5, 2018

ಇದು ಕನಸಲ್ಲ

 ಒಂದಿರುಳು ಕನಸ ಕಂಡೆ
ಜಗದಗಲದ
ಜೀವಸಂಕುಲಗಳೆಲ್ಲ ಮುಗಿದು,
ಭೂಮಿಯೊಳಗೆ ಹುಗಿದು,
ಭೂಮಿ, ಅಂತರಿಕ್ಷದಲ್ಲಿ ಸಿಡಿದು,
ಅಂತರಿಕ್ಷ, ಬ್ರಹ್ಮಾಂಡಗಳು
ನಿನ್ನೊಳೊಂದಾಗುದ ಕಂಡೆ.
ನಾನು ಅಳುತಿದ್ದೆ,
ಸೃಷ್ಟಿ ಮುಗಿದುದಕ್ಕೆ .
ನೀನು ಮುಗುಳ್ನಗುವುದ ಕಂಡೆ ,
ಮತ್ತೊಂದು ಹೊಸ ಸೃಷ್ಟಿಯ ಸಂಭ್ರಮಕೆ.
ಹೌದು, ಎಲ್ಲ ಮುಗಿದ ಮೇಲೆ
ನಾ ಹೇಗೆ ನಿನ್ನ ಕಂಡೆ ??.
ಬಹುಶ: ನೀ ನನ್ನ ಕಂಡೆ !!.

--------------------------------------------------------------------------------ಸುಕೇಶ್ ಪೂಜಾರಿ 

Saturday, November 3, 2018

ಸವತಿಯ ಕನಸು !!!!.

ನನಗೆ ನಿದಿರೆಯ ಮೇಲೆ ಮುನಿಸು
ನಿನ್ನೆಯ ಅರ್ಧ ಕನಸ
ಕಾಣುವ ಮನಸು.
ಕೆಂಬಣ್ಣದ ಗುಲಾಬಿಯ
ಬಣ್ಣಗಳ,
ಸಂಪಿಗೆಯ ಸೌಗಂಧಗಳ,
 ಮೈ ಮೇಲೆ ಮೆತ್ತಿ,
ಸುಕೋಮಲೆ ನೀ,
ಹಾಗೆ ನಡೆದು ಬಂದಾಗಲೇ
ಬೆಳಕಾಗಬೇಕ,
ಕೋಳಿ ಕೂಗಬೇಕ.!!.

ಕೈಯಲ್ಲಿ ಹಿಡಿದ
ಲಾಂದ್ರದ ಬೆಳಕು
ನಾಚುತ್ತಿದೆ ನೋಡಿ
ಸೊಂಟದ ಬಳುಕು .
ಕಾಡಿಗೆಯದೇನೋ ಬೇಡಿಕೆ ,
ಕಣ್ಣು ಅದ ಹುಡುಕಾಡುತ್ತಿದೆ .

ದಾರಿ ನಿನ್ನಯ ಹೆಜ್ಜೆಯ
ಸದ್ದಿಗೆ
ದಿಕ್ಕು ತಪ್ಪಿದೆ
ಕಣ್ಣು , ನಿನ್ನ ಕಾಣಲೇ ಬೇಕೆಂಬ
ಹಠಕ್ಕೆ ಜೋತುಬಿದ್ದಿದೆ .
ಇನ್ನೇನೊ ನೀ 
ನನ್ನೊಡನೆ ಬಂದು ಕೂರಬೇಕು
ಎನ್ನುವಷ್ಟರಲ್ಲಿ
ಬೆಳಕು ಹರಿದಿದೆ
ಹೊದಿಕೆ ಸರಿದಿದೆ .

ಇಂದು ಮತ್ತೆ ,
ನಿದಿರೆಗೆ ನನಮೇಲೆ ಮುನಿಸು,
ನನಗೆ ಆಕೆಯ ಸವತಿಯ ಕನಸು !!!!.



------------------------------------------------------------------------------ಸುಕೇಪು

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...