Monday, August 1, 2016
Wednesday, July 27, 2016
ಮೋಡದ ಮುನಿಸು
ಬಾರದ ಮಳೆ
ಮೋಡದ ಮುನಿಸು
ಒಡೆದ ಭೂಮಿಯಲ್ಲಿ
ಚಿಗುರೊಡೆಯದ ಮೊಳಕೆ
ಸಿಡಿಲ ದ್ವನಿ
ಮೋಡದ ಮುನಿಸು
ಒಡೆದ ಭೂಮಿಯಲ್ಲಿ
ಚಿಗುರೊಡೆಯದ ಮೊಳಕೆ
ಸಿಡಿಲ ದ್ವನಿ
ಒಂದು ಹನಿಗೆ
ಕತ್ತು ಎತ್ತಿ ಮೇಲೆ
ನೋಡುವಾಗ
ಜಾರಿದ್ದು ಕಂಬನಿ.
ಕತ್ತು ಎತ್ತಿ ಮೇಲೆ
ನೋಡುವಾಗ
ಜಾರಿದ್ದು ಕಂಬನಿ.
ಕಪ್ಪೆ,ಕತ್ತೆಗಳಿಗೆ
ಮದುವೆ ಮಾಡಿದ್ದಾಯಿತು.
ಅಭಿಷೇಕಕ್ಕೂ
ವರುಣ ಒಲಿಯಲಿಲ್ಲ
ಊರ ಹಳ್ಳ ತುಂಬಲಿಲ್ಲ.
ಮದುವೆ ಮಾಡಿದ್ದಾಯಿತು.
ಅಭಿಷೇಕಕ್ಕೂ
ವರುಣ ಒಲಿಯಲಿಲ್ಲ
ಊರ ಹಳ್ಳ ತುಂಬಲಿಲ್ಲ.
ಬರಡು ಭೂಮಿಗೆ
ಸರಕಾರದ ಕುರುಡು
ಅದೇನೋ ಕಲ್ಯಾಣ ಯೋಜನೆ,
ಕಾದು ಕಾದು ತುಕ್ಕು ಹಿಡಿದ ನೇಗಿಲು
ಜೀವ ಸುಕ್ಕು ಚರ್ಮ ಹೊದ್ದು
ಕಾಯುತಿತ್ತೆ ಕೊನೆಗೊಂದು
ನಿಟ್ಟುಸಿರು ಬಿಡಲು.
---------------------------------------------------------------ಸುಕೇಶ್
Monday, July 4, 2016
ಗುಂಗು ,ಗೆರೆ ಮತ್ತು ಗೊಂದಲ
ಗುಂಗಲ್ಲೇ
ಕಳೆದುಹೋಗುದು
ಯಾಕೋ ರೂಢಿಯಾಗಿದೆ,
ಹೃದಯ, ಮನಸಿನ ಮಾತು
ಕೇಳುತ್ತಿಲ್ಲವೆಂದು
ಮೆಲ್ಲ ಚಾಡಿ ಹೇಳಿದೆ.
ಸುತ್ತ ನಾನೇ ಎಳೆದ ಗೆರೆ,
ದಾಟಲೊಲ್ಲದೆ,
ನಿಮಿಷಗಳು, ವರುಷಗಳ
ನಡುವಿನ ವ್ಯತ್ಯಾಸದ ಜೊತೆ
ಅದೆಸ್ಟೋ ಬದುಕಿದ್ದೆ.
ಮನಸು ಗೆರೆ ಪಕ್ಕ ನಿಂತು
ಇನ್ನೂ ಕಾಯುದೆ??!!
ಅರೆ!! ಹಾಕಿಕೊಂಡ ಗೆರೆ
ಕಾಣುತ್ತಿಲ್ಲ,
ಯಾರೋ ಬಂದು
ಅಳಿಸಿ ಹೋದರೆ?
ಪುಟ್ಟ ಹೃದಯ
ಬಲಿಯಾಗಬಹುದೇನೋ
ಮತ್ತೆ ಹೀಗೆ ಆದರೆ.
ತಿಳಿಯದಾಗಿದೆ ಯಾಕೋ,
ಏನೋ ಗೊಂದಲ.
ಮನಸ್ಸೇ ದಯವಿಟ್ಟು
ಕ್ಷಮಿಸು ಅಂದಿತು
ಹೃದಯ ಮತ್ತೆ ಈ ಸಲ.
ಗುಂಗಲ್ಲೇ
ಕಳೆದುಹೋಗುದು
ಯಾಕೋ ರೂಢಿಯಾಗಿದೆ,
ಹೃದಯ ಮಾತು ಕೇಳದೆ
ಎಲ್ಲೋ ಓಡಿಹೋಗಿದೆ!!!!!.
-------------------------------------------------------------------ಸುಕೇಶ್
Wednesday, May 18, 2016
ಸಂಬಂಧಗಳು
ಮೋಡ ಆಗಸ್ಟೇ ಒಂದಿಸ್ಟು ಮಳೆ ಸುರಿಸಿ ,ಭೂಮಿಯನ್ನು ಮತ್ತೆ ಮತ್ತೆ ಪೀಡಿಸುತಿತ್ತು. ಮಿಂಚು ಹುಳವೊಂದು ತನ್ನ ಬೆಳಕು ಉರಿಸಿ ಇರುಳ ಆಗಸದಲ್ಲಿ ಚಂದಿರನ ಯಾಕೋ ಹುಡುಕುತಿತ್ತು,ದಾರಿ ದೀಪವೊಂದು ವಿದ್ಯುತ್ ಬರುದನ್ನೇ ಕಾದು ಕಾದು ಸೋತು ತಲೆ ಬಾಗಿ ನಿಂತೇ ಇತ್ತು, ಗಾಳಿಗೇನೋ ಆಸೆ, ಉರಿವ ಮೇಣದ ಬತ್ತಿಯ ಆರಿಸಲು, ಬಹುಶಃ ಆಗಷ್ಟೇ ಬಿದ್ದ ಮಳೆಗೆ ಖುಷಿಯಿಂದ ಭೂಮಿಯಿಂದ ಎದ್ದ ಚಿಟ್ಟೆ ಹುಳದ ಆತ್ಮಹತ್ಯೆ ತಡೆವ ಕಡೆಯ ಪ್ರಯತ್ನ ಇರಬೇಕು.
ಗೆಳೆಯ ಫೋನಿನಲ್ಲಿ ತನ್ನ ಹುಡುಗಿ ಜೊತೆ ಅತಿ ದೊಡ್ಡ ಸ್ವರದಲ್ಲಿ ಕಿರುಚುತಿದ್ದ "This is the end!! I don't want to discuss anything about our relationship, Don't call me!! Don't text me. this is the end!!!".
ತುಂಬ ಜನರನ್ನು ನೋಡಿದ್ದೇ,ಕೇಳಿದ್ದೆ , ಒಬ್ಬರನ್ನು ಇಷ್ಟ ಪಡುತ್ತೇನೆ ಎಂದು ಹೇಳುದಕ್ಕೆ ತಿಂಗಳು, ವರ್ಷಗಟ್ಟಲೆ ಕಾಯುತ್ತಾರೆ,ಕೆಲವರಂತು ಹೇಳಲಾಗದೆ ಜೀವನ ಪೂರ್ತಿ ಒದ್ದಾಡುತ್ತಾರೆ. ಅಂಥಹುದರಲ್ಲಿ ಅದೇ ಸಂಬಂಧಗಳನ್ನು ಕಡಿಡುಕೊಳ್ಳಲು ಕೆಲವೇ ಕ್ಷಣಗಳು ಸಾಕೇ ?? ಸಂಬಂಧಗಳ ಬಂಧ ಅಸ್ಟೊಂದು ತೆಳುವಾಗಿ ಜೋಡಿಸಲ್ಪಟ್ಟಿದೆಯ?.
ಒಡೆದ ಸಂಬಂಧಗಳು, ಒಡೆದ ಮೊಬೈಲ್ ನ ಪರದೆ ಬದಲಾಯಿಸಿದಸ್ಟೇ ಸುಲಭವಾಗಿ ಬದಲಾಗುವ so called ಆಧುನಿಕ ಯುಗವಿದು. living in relationship ಸಂಬಂಧ ಶಬ್ದದ ವ್ಯಾಖ್ಯಾನವನ್ನು ಬದಲಾಯಿಸಿದೆ , ಗಂಡ- ಹೆಂಡತಿ, ಅಪ್ಪ-ಅಮ್ಮ, ಅಕ್ಕ- ಅಣ್ಣ, ಮುಂತಾದ ರಕ್ತ ಸಂಬಂಧಗಳು ಪೋನ್ ನ ಹಾಯ್, ಹಲೋ ಗಲಿಗಸ್ಟೇ ಸೀಮಿತವಾಗಿದೆಯೇನೋ ಅಂತ ಅನಿಸುತಿದೆ . ಕೆಲವರನ್ನು ನೋಡಿದ್ದೇನೆ , ಯಾರೋ ಪೋನ್ ಮಾಡಿದರೆ ಸುಮಾರು ಅರ್ಧ ಗಂಟೆ ಮಾತಾಡಿ ಆಮೇಲೆ ಪೋನ್ ಕಟ್ ಮಾಡಿ ಮತ್ತೊಂದಷ್ಟು ಹೊತ್ತು ಅವರು ಯಾಕಾಗಿ ಪೋನ್ ಮಾಡಿದರೋ ಅಂತ ಬಯಿದುಕೊಳ್ಳುತ್ತಾರೆ.ಕೆಲವೊಂದು ಸಂಬಂಧಗಳನ್ನು ಅರ್ಥ ಮಾಡಿ ಕೊಲ್ಲುದು ತುಂಬಾ ಕಷ್ಟ!!!.
ಬಸ್ಸಿನ ಪಕ್ಕದ ಸೀಟಿನಲ್ಲಿ ಒಂದಸ್ಟು ಹೊತ್ತು ಕುಳಿತು ಅದೇನೋ ಮಾತಾಡಿ ಹೋದ ಅಪರಿಚಿತರು, ಜೀವನ ಪೂರ್ತಿ ಜೊತೆಗಿರುತ್ತೀನಿ ಎಂದು ಹೇಳುತ್ತ, ಕಾರಣವೇ ಇರದೆ ಎದ್ದು ಹೋದ ಪರಿಚಿತರು ,ಬರಿ ಮುಗುಳ್ನಗುಗಳಿಗೆ ಜೊತೆಯಾಗುವ ಇನ್ನು ಕೆಲವರು, ಸಂಬಂಧಗಳಿಗೆ ಅರ್ಥ ಹುಡುಕುವಾಗಲೆಲ್ಲ ಮತ್ತೆ ಮತ್ತೆ ಕಾಡುತ್ತಾರೆ.
ನಾವು ಹುಟ್ಟಿದಾಗ ನಮ್ಮ ಜೊತೆ ಸಂಬಂಧಗಳು ಹುಟ್ಟಿಕೊಳ್ಳುತ್ತವೆ, ಆದರ ಸಾಯುವಾಗ ನಾವು ಮಾತ್ರ ಸಾಯುತ್ತೇವೆ ನಮ್ಮ ಜೊತೆಗಿನ ಸಂಬಂಧಗಳು ಹಾಗೇ ಉಳಿಯುತ್ತವೆ. ಇದೇ ಬದುಕಿನ ವಿಚಿತ್ರ !!. ಸಂಬಂಧಗಳ ಕಡಿದುಕೊಂಡು ಬದುಕುವ ನೋವು ಸಂಬಂಧಗಳ ಜೊತೆ ಹುಟ್ಟುವಾಗಿನ ನೋವಿನಸ್ಟೇ ಇರಬಹುದೇನೋ ಬಹುಶಃ.
----------------------------------------------ಸುಕೇಶ್
Wednesday, May 4, 2016
ಕಿವಿಯ ಜುಮುಕಿ
ಕದ್ದು ಇಣುಕಿ
ನೋಡಲತ್ತ ಮೆಲ್ಲಗೆ,
ಕಂಪ ಸೂಸಿ ಬಿರಿಯುತಿತ್ತು
ತುಟಿಯ ನಗು ಮಲ್ಲಿಗೆ
ಸರಸ ತಂಪು ಗಾಳಿಗೆ,
ಕಚಗುಳಿಯು ಕೆನ್ನೆಗೆ
ಗಲ್ಲದಲೆದ್ದ ಸಣ್ಣ ಗುಳಿ
ಸೆಳೆದುಕೊಂಡಿತೇಕೋ
ನನ್ನ, ನಿನ್ನ ಬಳಿ.
ಕಣ್ಣ ಮುಚ್ಚಿದಾಗಲೆಲ್ಲ
ಕಣ್ಣ ಪರದೆಯ ಮೇಲೆ ಬಂದು
ಖಾಲಿ ಹಾಳೆ ಹಿಡಿದು, ಕವಿತೆ ಬರೆ
ಎಂದು ಕಾಡುದ್ಯಾಕೆ ಇತ್ತೀಚೆಗೆ ??!!
ಸಾಲು ಸಾಲುಗಲನು ಎಲ್ಲ, ನೀನೇ ಹೇಳಿಕೊಟ್ಟು
ಎನೋ ತಿಳಿಯದಂತೆ ನಗುತ , ತಿರುಗಿ
ಹೋಗುದ್ಯಾಕೆ ಮತ್ತೆ ದೂರದಾಚೆಗೆ??!!.
ಕನಸ ಸರಣಿ
ಎದೆಯ ಧರಣಿ
ಜಾರಲೊಲ್ಲದ ಸಮಯ,
ಮತ್ತೆ ಹೀಗೆ ಯಾರಿಗೋ
ಕಾಯುದಕ್ಕೆ ಇನ್ನು ಕೊನೆಯ?!!!!!.
--------------------------------------------------------------------------ಸುಕೇಶ್
Wednesday, April 13, 2016
ಹಾಗೆ ಸುಮ್ಮನೆ -೪
ಅರ್ಧ ಚಂದಿರ ಕಳೆದುಕೊಂಡಿರುವ ಇನ್ನರ್ಧ ಹುಡುಕುತ್ತ ಬಾನೆಲ್ಲ ಅಲೆಯುತಿದ್ದ,ಒಂಟಿ ದಾರಿ ದೀಪ ತಿರುವು ರಸ್ತೆಗಳ ಜೊತೆಗೂಡಿ ಯಾರದೋ ದಾರಿ ಕಾಯುತಿತ್ತು,ಚಳಿಗಾಳಿಗೆ ಹೆದರಿ ಮರವೊಂದು ಮೆಲ್ಲ ನಡುಗುತಿತ್ತು, ನೀರವ ರಾತ್ರಿಯಲ್ಲಿ ಮೋಡಗಳು ಒಂದಕ್ಕೊಂದು ಏನೋ ಪಿಸುಗುಡುತಿದ್ದವು, ನಾ ಎಂದೋ ಬರೆದಿಟ್ಟ ಕೆಲವು ಸಾಲುಗಳಿಗೆ ಮತ್ತೊಂದಿಸ್ಟು ಸಾಲುಗಳ ಸೆರಿಸುತಿದ್ದೆ.
ಅಜ್ಜನ ಹಳೆಯ ಚಪ್ಪಲಿ ಮೂಲೆಯಲ್ಲಿ ಹಾಗೆ ಬಿದ್ದಿತ್ತು, ಬದುಕಿನ ತುಂಬ ನಡೆದು ಸುಸ್ತಾದಂತೆ, ಮತ್ತೆ ಎಂದೋ ನಡೆಯುವ ಹಂಬಲ , ಅಜ್ಜ ಚಪ್ಪಲಿಯನೊಮ್ಮೆ ನೋಡಿ ನಿಟ್ಟಿಸಿರು ಬಿಟ್ಟ.ಏನೋ ಕೇಳಬೇಕೆಂದು ಕೊಂಡೆ, ಮತ್ತೆ ಇನ್ನೇನೋ ನೆನಪಾಯಿತು,ಹಿಂದೆ ಮೈಲುಗಳಗಟ್ಟಲೆ ನಡೆದೇ ಹೋಗುತಿದ್ದರಂತೆ ಊರಿಂದ ಊರಿಗೆ ಹೆಗಲ ಮೇಲೆ ಬುತ್ತಿ ಕಟ್ಟಿಕೊಂಡು, ಹಿಂತಿರುಗಿ ಬರುವಾಗ ಖಾಲಿ ಬುತ್ತಿಯಲ್ಲಿ ಆ ಊರಿಂದ ಈ ಊರಿಗೆ ಕನಸುಗಳ ಹೊತ್ತುಕೊಂಡು.
ಸವೆಸಿದ ದಾರಿಗೆ ಸವೆದ ಚಪ್ಪಲಿಗಳ ಪುರಾವೆ!! ದಾರಿಯ ತಿರುವಿನ ಕಟ್ಟೆಗಳಲ್ಲಿ, ಬೀದಿಯಾಚೆಯ ಕೆರೆಯ ದಂಡೆಗಳಲ್ಲಿ ಯಾರೋ ಪ್ರತಿ ನಿತ್ಯ ಕಾಯೋರು , ದಾರಿ ದೀಪಗಳಿಲ್ಲದ ಊರು, ಮಲಗಿದಲ್ಲಿ ಆಕಾಶವೇ ಸೂರು, ಚೂರು ಚೂರು ಕನಸು!!ಬದುಕು ಮುಗಿಯದ ಪಯಣ.
'ಊರು ಸುತ್ತಿ ನೋಡು ಕೋಶ ಓದಿ ನೋಡು' ಅಂದಿದ್ದರು ಹಿರಿಯರು, ಊರು ಸುತ್ತುವಾಗ ಕೋಶ ಹೇಗೆ ಓದಲಿ?? ಅಂದಿದ್ದರು ಅಜ್ಜ ಒಮ್ಮೆ. ಊರು ಊರುಗಳ ಜನ , ಅವರ ಬದುಕು, ಕಥೆ , ಕನಸು, ಈಗ ಮನೆಯಲ್ಲೇ ಕೂತು ನೋಡುವ ಸೀರಿಯಲ್ಲುಗಳಿಗಿಂತ ಚೆನ್ನಾಗಿತ್ತಂತೆ !!
ನಮಗೆ ಎಲ್ಲಿದೆ ಸಮಯ ಅವರಂತೆ ಊರು ತಿರುಗಲು ,ನಾವು ಬದುಕನ್ನು ಕಟ್ಟಿಕೊಳ್ಳುವ ನೆಪದಲ್ಲಿ ನಮ್ಮನ್ನು ನಾವೇ ಒಂದು ಕಡೆ ಕಟ್ಟಿಕೊಳ್ಳುತ್ತೇವೆ. ಕೆಲವೊಮ್ಮೆ ಅಂದುಕೊಳ್ಳುತ್ತೇನೆ ನಾಗರಿಕತೆ ಹೀಗೆ ಬೆಳೆಯ ಬಾರದಿತ್ತೇನೋ ಎಂದು ,ಇಲ್ಲದಿದ್ದರೆ ನಾವು ಊರಿಂದ ಊರಿಗೆ ಅಲೆಯಬಹುದಿತ್ತು ಕನಸುಗಳ ಕಟ್ಟಿಕೊಂಡು. ಚಪ್ಪಲಿ ಸವೆಯ ಬಹುದೆಂಬ ಭಯ ಬಹುಶಃ ಕಾಡದೆ ಇರುತಿತ್ತು! .
ಊರು ಅಂದಾಗ ನೆನಪಾಯಿತು ,ಊರಿನ ಮನೆಗೆ ಹೋಗದೆ ತಿಂಗಳುಗಳೇ ಆಗಿ ಹೋಗಿದ್ದವು, ಮೊನ್ನೆ ಹೋಗಿ ಬಂದೆ .ಹಳೆ ರಸ್ತೆ ,ಟಾರು ಹೊದ್ದು ನನಗೆ ಏನೋ ಎಂಬಂತೆ ಕಾಯುತ್ತಿತ್ತು . ಆಗಷ್ಟೇ ಬಿದ್ದ ಮಳೆ ನಾ ಬರೋ ಮುಂಚೆ ರಸ್ತೆ ಶುಭ್ರಗೊಳಿಸಿ ಹೊರಡುವ ತಯಾರಿಯಲ್ಲಿತ್ತು.
ಓ ಊರ ದಾರಿಯಾಚೆಯ ದಿಬ್ಬ ರಸ್ತೆ ನೆಪದಲ್ಲಿ ಕರಗಿ ಹೋಗಿದೆ ,ಈಗ ಅಲ್ಲಿ ಹೋಗಿ ನಿಂತರೆ ಮುಳುಗೋ ಸೂರ್ಯ, ಗದ್ದೆಯ ಪೈರು,ಬಾನಚೆ ಹಾರುವ ಹಕ್ಕಿ ಕಾಣುದಿಲ್ಲಆದರು ಒಂದಷ್ಟು ಹೊತ್ತು ಸುಮ್ಮನೆ ನಿಂತೆ ಅಲ್ಲಿ , ಗಿರಕಿ ಹೊಡೆವ ನೆನಪುಗಳ ಸಾಂತ್ವಾನಿಸಲು.
ಇವತ್ತಿಗೆ ಇಷ್ಟು ಸಾಕು , ಮುಂದೊಂದು ದಿನ ಸಿಕ್ಕಾಗ ಮತ್ತೆ ಮಾತಾಡೋಣ.
ಗಡಿಯಾರದ ಮುಳ್ಳು ನಿಂತು ನಿಂತು ಪಯಣಿಸುತಿತ್ತು, ಸಮಯ ಕಳೆಯುತಿದೆ ಎಂದು ಮುಳ್ಳು ಚುಚ್ಚಿ ಚುಚ್ಚಿ ಹೇಳಿದಂತೆ . ಚುಚ್ಚಿಕೊಳ್ಳೋ ನೋವು ಹಚ್ಚೆ ಹಾಕಿಸಿಕೊಂಡ ನಂತರದ ಸುಖದ ಮುಂದೆ ಏನೇನೋ ಅಲ್ಲ .
ನಡೆದ ದಾರಿಗಳನ್ನೇ ಮತ್ತೆ ಮತ್ತೆ ನಡೆಯುದು,
ನೋವುಗಳಿಗೇ ಬಣ್ಣ ತುಂಬಿಸಿ ಖುಶಿಪಡುದೇ ಬದುಕೇ??
----------------------------------------------------------------ಸುಕೇಶ್
Monday, February 15, 2016
ಹಾಗೆ ಸುಮ್ಮನೆ -೩
ಮೊದ ಮೊದಲ ಮಳೆಗೆ
ಬಾರೆ ನನ್ನ ಜೊತೆ
ತುಸು ದೂರ ನಡೆಯಲು,
ಮನೆಸೇಕೋ ಕಾದಿದೆ
ಕನಸೊಂದ ಪಿಸು ನುಡಿಯಲು
ಸುರಿವ ಮಳೆಗೂ ಕೇಳದಂತೆ..........!!!!!
ಕನವರಿಕೆಗಳಲ್ಲಿ ಬಂದು
ಕವಿತೆಗಳ ಕೊಟ್ಟು
ತಿರುಗಿ ಹೋದಾಗಿನ ಹೆಜ್ಜೆ ಸದ್ದು,
ಮತ್ತೆ ಕೇಳ ಬಯಸುತ್ತೇನೆ
ಮೌನಗಳಿಗೂ ತಿಳಿಯದಂತೆ ಕದ್ದು ಕದ್ದು!!
ಎದೆ ಹಳೆಯ ಸೂರು,
ಜೋತಾಡುತ್ತಿರುವ ಕನಸು,
ನೆನಪು ಮಂದಾನಿಲ.
ಸನಿಹಕು ದೂರಕು ನಡುವಿನ
ಅಂತರ ಅಳೆಯುವ
ಗಡಿಯಾರಕ್ಕೆ ಅದೆಂಥದೋ ಕುತೂಹಲ .
ಮೊದ ಮೊದಲ ಮಳೆಗೆ
ಬಾರೆ ನನ್ನ ಜೊತೆ
ತುಸು ದೂರ ನಡೆಯಲು.
ಬರೆದಿರುವ ಹೊಸದೊಂದು ಕವಿತೆ
ನಿನಗೆಂದೇ ಗುನುಗಲು
ಸುರಿವ ಮಳೆಗೂ ಕೇಳದಂತೆ !!!!!.
---------------------------------------------------------------------ಸುಕೇಶ್
Subscribe to:
Posts (Atom)
ಅಗ್ನಿಯ ಬಟ್ಟಲು
ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ ...
-
ಯಾಕೋ ಎಲ್ಲಿಗಾದರು ಒಬ್ಬನೇ ಹೋಗಿ ಬರಬೇಕೆನಿಸಿತು.ನನ್ನೊಳಗಿನ ನನ್ನ ಹುಡುಕಲು. ಬದುಕಿಗೆ ಒಂದಷ್ಟು ಹೊತ್ತಿನ ಏಕಾಂತದ ಅವಶ್ಯಕತೆ ಇತ್ತು. ಒಂದಷ್ಟು ಬಟ್ಟೆಗಳನ್ನ ಬ್ಯಾಗ್ ...
-
೧ ಬೆಳಕು ತಾನು ಕಳೆದುಹೋದಂತೆ ನಟಿಸಿತು ಕತ್ತಲೆಯ ವೇಷಧರಿಸಿ, ಒಂದಷ್ಟು ಹೊತ್ತು. ಯಾರೋ ದೀಪ ಹಚ್ಚಿದರು ವೇಷ ಬಯಲಾಯಿತು,ಬದಲಾಯಿತು ಜಗದ ನಾಟಕ ಹೀ...
-
ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ ...






