Monday, November 12, 2018

ಇದೇಕೆ ಹೀಗೆ?

ಕೆಲವೆಡೆ ಮೂರು ಹೊತ್ತು ಉಣ್ಣಲು
ಚಿನ್ನದ ಬಟ್ಟಲು.
ಇನ್ನು ಕೆಲವೆಡೆ
ಮುರಿದ ಕೈ ತೂಗುತ್ತಿದೆ
ದಾರಿದ್ರ್ಯದ ತೊಟ್ಟಿಲು .
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಕೆಲವರು ಎಲ್ಲ ಬಲ್ಲವರು
ತಲೆ ಸರಸ್ವತಿಯ ಮನೆ,
ಜ್ಞಾನ,ಚಿಂತನೆ ವಿಚಾರ.
ನಾವು-ನೀವೋ , ಏನು ಬಲ್ಲಿರಿ ?
ಅಜ್ಞಾನ, ಚಿಂತೆ, ಸಾಮಾನ್ಯ ವ್ಯವಹಾರ.
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಆಗೋ ಅಲ್ಲಿ ನೋಡಿ,
ಆ ಸೌಂದರ್ಯ,ಮೈ ಬಣ್ಣ,
ಅಪರಂಜಿ , ಹುಣ್ಣಿಮೆಯ ಜಾತ್ರೆ.
ಇಗೋ ಇತ್ತ ಕಣ್ಣು ಹಾಯಿಸಿ,
ತೂಕವಿಲ್ಲದ ದೇಹಕ್ಕೆ
ಬಣ್ಣಕ್ಕೆಲ್ಲಿ ಕಾಂತಿ.
ಕಣ್ಣ ಬೊಂಬೆಯ ಸುತ್ತದ ಬಿಳಿಯು
ಬದಲಾಗುತ್ತಿದೆ,
ಬದುಕು ನಡುಇರುಳ ಯಾತ್ರೆ.
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಅಲ್ಲಿ ದಷ್ಟ -ಪುಷ್ಠ ಮಾಂಸಖಂಡಗಳು ,
ತಿಂದುದನು ಕರಗಿಸುವುದಕೆ
ಓಡುವ ಜನ.
ಪ್ರದರ್ಶನ ,ಮೆಡಲ್ ಗಳು
ಅದಕೊಂದು ಪ್ರಮಾಣ ಪತ್ರ .
ಇಲ್ಲಿ ಎಲುಬುಗಳ ಪ್ರದರ್ಶನ ,
ಹೊತ್ತನ್ನದ ಊಟಕ್ಕೆ
ಮುಗಿಯುವುದು ದಿನದ ಗಡಿಯಾರದ ಓಟ,
ಜೊತೆಗೆ ಸವೆದ ಸವೆದ ಚಪ್ಪಲಿ
ಚಿಂದಿ ಬಟ್ಟೆಗಳು ಮಾತ್ರ.
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಒಂದೆಯಾದರೆ ಸೃಷ್ಟಿಯ ಮೂಲ 
ಎಂತಿಣಿತು ವೈರುದ್ಯ ?
ಇಷ್ಟೊಂದು ವೈವಿಧ್ಯ ?
ಎಳೆದು ಬಿಟ್ಟಿದ್ದರೆ ಆತ,
ಸಮಾನತೆಯ ಗೆರೆ . 
ಹುಟ್ಟುತಿತ್ತೆ ಪ್ರಶ್ನೆ 
ಇದೇಕೆ ಹೀಗೆ ?,ಇದೇಕೆ ಹೀಗೆ ?.
ಎಲ್ಲದಕ್ಕೂ ಅದರದೆ ಇತಿಮಿತಿ 
ಸೃಷ್ಟಿಕರ್ತನ ಪರಿಮಿತಿ . 




                                                                                                           ಸುಕೇಶ್ ಪೂಜಾರಿ 





1 comment:

  1. ಕನ್ನಡವನ್ನು ಆಯ್ಕೆ ಮಾಡಿ

    ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ...
    ..
    ಕನ್ನಡವನ್ನು ಉಳಿಸಿ, ಬೆಳೆಸಿ..
    ..
    https://Www.spn3187.blogspot.in (already site viewed 1,32,868+)
    &
    https://t.me/spn3187 (already Joined 484+)
    ..
    Share your friends & family also subcrib (join)

    ReplyDelete

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...