Saturday, December 22, 2018

ಬೆಳಕು


             ೧
ಬೆಳಕು ತಾನು
ಕಳೆದುಹೋದಂತೆ ನಟಿಸಿತು
ಕತ್ತಲೆಯ ವೇಷಧರಿಸಿ, ಒಂದಷ್ಟು ಹೊತ್ತು.
ಯಾರೋ ದೀಪ ಹಚ್ಚಿದರು
ವೇಷ ಬಯಲಾಯಿತು,ಬದಲಾಯಿತು
ಜಗದ ನಾಟಕ
ಹೀಗೆ ನಡೆಯುತಿತ್ತು.

         ೨
ಬೆಳಕಿನ ಒಳಗೆ ಇರುಳು
ಇರುಳಿನ ಉರುಳಿನೊಳಗೆ ಬೆಳಕು
ಕಪ್ಪು-ಬಿಳುಪು ಬಣ್ಣಗಳ ಆಚೆ
ಕಣ್ಣ ಹೊರಳಿಸಿದರೆ
ಎಲ್ಲ ಅರಳು-ಮರಳು
ಜಗದ ನಿಯಮದ ತಿರುಳು

          ೩
ಬೆಳಕಿನ ಮುಂದೆ
ಓಡುತಿತ್ತು ಕರಿಛಾಯೆ
ಮೋಹ ಮಾಯೆ,
ಕೈಯಲ್ಲಿ ಹಿಡಿದು ದೀವಟಿಗೆ
ಕರೆದಂತಾಯಿತು ಯಾರೋ ತನ್ನೆಡೆಗೆ
ಈಗ ನಿನ್ನೆಯವರೆಗೆ ಸುತ್ತುತಿದ್ದ
ಸೊನ್ನೆಯ ಬಿಂದು
ಅನಂತತೆಯಲ್ಲಿ ಒಂದು.



-------------------------------------------------------------ಸುಕೇಶ್ ಪೂಜಾರಿ (ಸುಕೇಪು)

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...