
ಕೆಲವೊಮ್ಮೆ ನಮಗೆ
ಸ್ವಾತಂತ್ರ್ಯ ಸಿಕ್ಕಿದೆ
ಎಂದು ಗೊತ್ತಾಗುದು
ನಡು ಬೀದಿಯಲ್ಲಿ ಕೊಲೆಗಳು ನಡೆದಾಗಲೇ!!!
ಮಳೆ
ಜೋಪಾನವಾಗಿ
ಬಚ್ಚಿಟ್ಟ ಮುತ್ತಿನ
ಮಳೆ ಹನಿಗಳನ್ನು
ಮುಗಿಲು ಮರೆತು ಚೆಲ್ಲಿ ಬಿಟ್ಟಿತು .!!
ವ್ಯತ್ಯಾಸ
ಒಂದೊಂದೇ ಮೆಟ್ಟಿಲು ಏರಿದರೆ
ಸುಲಭ ಈ ದಾರಿ !
ಒಂದು ಬಿಟ್ಟು ಒಂದು ಏರ ಹೋದರೆ
ಬೀಳಬಹುದು ನೀ ಜಾರಿ !!
ಮೌನ
ಅವರಿಗೇನು ಗೊತ್ತು
ನಮ್ಮ ಮೌನಗಳಿಗೆ ನೂರಾರು
ಅರ್ಥಗಲಿವೆಂದು!
ಒಂದಾದರು ಅರ್ಥವಾಗಿದ್ದರೆ
ನಾವು ಮಾತಾಡಬಹುದಿತ್ತು !!
ನೆನಪು
ಈ ನೆನಪುಗಳೇ ಹೀಗೆ
ರಂಗದ ಹಿಂದೆ
ಚಲಿಸುವ ನೆರಳಿನ ಹಾಗೆ.
No comments:
Post a Comment