Wednesday, January 3, 2018

ಪೆನ್ನು-ಒಂದು ಉಡುಗೊರೆ

ಪೆನ್ನು ಕಿಸೆಯಲ್ಲಿ
ಕಕ್ಕಿಕೊಂಡದ್ದಕ್ಕೆ
ಅಮ್ಮನಿಂದ ನನಗೆ ಪೆಟ್ಟು
ನನಗೆ ಪೆನ್ನ ಮೇಲೆ ಸಿಟ್ಟು.

ಕಿಸೆಯ ಮೇಲೆ
ಕಿಸಕ್ಕನೆ ಚೆಲ್ಲಿದ್ದು
ನೀಲಿ ನಗೆ .
ಅದರಲ್ಲೂ ಹಲವು ಬಗೆ,
ಅಳಿಸಲು ಉಜ್ಜಿಕೊಂಡಷ್ಟು
ಆಳಕ್ಕಿಳಿಯುದು ಹೇಗೆ?
ನನ್ನ ಅಳು  ನಿಲ್ಲಿಸಲ್ಲು
ಅಮ್ಮ ಮಾಡುವ ಎಲ್ಲ ಪ್ರಯತ್ನಗಳ ಹಾಗೆ.

ಹಾಳೆ ಮೇಲೆ ಬರೆಯದ ಪೆನ್ನು
ನಾ ಬೆಂಚಿಗೆ ಉಜ್ಜಿದ್ದಕ್ಕೆ
ಸೇಡು ತೀರಿಸಿಕೊಂಡಿತೆ?
ಬಿಳಿಯ ಅಂಗಿ ತುಂಬ
ನೀಲಿ  ಚೆಲ್ಲಿ
ಪುಳಕಗೊಂಡಿತೆ?

ಮೇರಿ ನನ್ನ ಹುಟ್ಟುಹಬ್ಬಕ್ಕೆ ಕೊಟ್ಟದ್ದು
ಬರೆಯದಿದ್ದರೂ
ಕಿಸೆಯಲ್ಲಿತ್ತು.
ಅಂದ ಹಾಗೆ
ಪೆನ್ನಿಗೇನು ಗೊತ್ತು
ನನ್ನ ಪುಟ್ಟ ಜಗತ್ತು.

ಉಜ್ಜಿ ಒಗೆದು ಸುಸ್ತಾದ
ಅಮ್ಮನ ಕೋಪ
ಆ ಪೆನ್ನಿನ ಮೇಲೆ.
ಎತ್ತಿ ಬಿಸಾಕಿ,
ಜೊತೆಗೊಂದಷ್ಟು ಶಾಪ,
ಬಹುಶ ಮೇರಿಗೆ ಗೊತ್ತಾದರೆ
ನೊಂದುಕೊಂಡಾಳೇನೋ ಪಾಪ !!!




------------------------------------------------ಸುಕೇಶ್ ಪೂಜಾರಿ 

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...