Sunday, April 19, 2015

ಮಳೆ ಮತ್ತು ಕವಿತೆ

ಮತ್ತೆ ಮೋಡ ಬಂದಿದೆ
ಹನಿಯ ಸುರಿಯಲು
ಜೊತೆಗೆ ನೆನಪ ತಂದಿದೆ
 ಕಣ್ಣೀರ ಹರಿಸಲು

ಏನೋ ಒಂದು ಕೊರತೆ ಕಾಡುತಿತ್ತು ...
ಅದು ನೀನು ಎನ್ನದು ನನಗು ಗೊತ್ತು .....

ದೂರ ಎಲ್ಲೋ ಸುರಿವ ಮಳೆಗೆ ,
ಕಾದು ಕಾದು ಒಣಗಿದ ಬೆಳೆಗೆ ,
ರೈಲೇ ಬಾರದ ಹಳೆಯ ಹಳಿಗೆ,
ನೆನೆಪು ಒಂದು ಕಾದಿದೆ
ಅದರ ಸುತ್ತ ಈ ಬಾಳಿದೆ.

ಕಪ್ಪು ಮೋಡ,ಬಣ್ಣಗಳ ಕನಸು.
ಅಲ್ಲಲ್ಲಿ ಮಿಂಚುಗಳ ಗೆರೆ.
ಕರಗಿದ ಕಾರ್ಮೋಡಗಳಿಗೆ,ಮರೆಯದ ನೆನಪುಗಳಿಗೆ
ಕಂಬನಿಗಳೇ ಆಸರೆ

ಮಳೆ ಸುರಿಸುತಿತ್ತು  ಮೋಡ
ಅತ್ತು ಅತ್ತು, ಸಿಡಿಲುಗಳಿಗೆ ಹೆದರಿ.....
ಹೃದಯ ಬಡಿಯುತಿತ್ತು....
ಸೋತು ಸೋತು ಬದುಕಿಗೆ ಹೆದರಿ .





1 comment:

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...