Thursday, April 23, 2015

ಹಾಗೆ ಸುಮ್ಮನೆ-೧

ಸಂಜೆ ಸೂರ್ಯ ಮುಳುಗುವ ತವಕದಲ್ಲಿದ್ದ, ಗಾಳಿ ಜೋರಾಗಿ ಬೀಸುತಿತ್ತು ,ಮಳೆ ಬರುವ ಸೂಚನೆ.ಗಿಡ ಮರಗಳೆಲ್ಲ ಗಾಳಿ ಕುಡಿದು ಅಮಲಿನಿಂದ ತೂರಾಡುತಿತ್ತು .office ನಿಂದ ಮನೆಗೆ ಹೊರಟಿದ್ದೆ ಕಾಲು ನಡಿಗೆಯಲ್ಲಿ.ತಂಪಾದ ಗಾಳಿ ಜೊತೆ ಮನಸ್ಸು ಏನೋ ಗುನುಗುತಿತ್ತು. ಹಾರುವ ಧೂಳು ,ಒಣಗಿಧ ಎಲೆ, ನೆಲೆ ಇಲ್ಲದಂತೆ  ಹಾರಡುತಿತ್ತು.

ಒಮ್ಮೆ ಯೋಚಿಸಿದೆ ದಿನಗಳು ಹೇಗೆ ಉರುಳಿ ಹೋದವು ನಿಮಿಷಗಳ ಜೊತೆಗೆ ಸದ್ದೇ ಮಾಡದೆ. ಬರೆಯದೆ ಕೆಲವು ವರುಷಗಳೇ ಆಗಿದ್ದವು,ಸೋಮಾರಿ ಬದುಕು ಎಲ್ಲವನ್ನು ನುಂಗಿ ನೀರು ಕುಡಿದಿತ್ತು. ಈಚೆಗೆ ಬೇಟಿಯಾದ ಒಬ್ಬರು ನನ್ನ ಕವಿತೆಗಳ ಪುಸ್ತಕ ಒದಿ ಕೇಳಿದರು "ಈವಾಗ ಬರೆಯುತಿಲ್ಲವೇ ??" ಮತ್ತೆ ಬರೆಯಬೇಕು ಅನ್ನಿಸಿತು, ಏನು ಬರೆಯಲಿ ಖಾಲಿ ಮನಸ್ಸಿಗೆ ನಾನೇ ಕೇಳಿಕೊಂಡೆ .

ಬರೆಯುದು, ಓದೋದು ಒಮ್ಮೆ ಶುರು ಮಾಡಿಕೊಂಡರೆ ದುರಬ್ಯಾಸದ ರೀತಿ ಅಂಟಿಕೊಳ್ಳುತದೆ,ಇಂಥಹ ಕೆಲವು ದುರಬ್ಯಾಸಗಳೇ ಬದುಕಿಗೊಂದು ಅರ್ಥ, ಸಾಂತ್ವಾನ ನೀಡುದು. ಕೆಲವು ವರುಷಗಳ ಹಿಂದೆ ಬರೆದ ನನ್ನದೇ ಕವಿತೆಗಳ ಓದಿದೆ,  ಕೆಲವು  ಸಾಲುಗಳು  ಮತ್ತೆ ಕಾಡಿತ್ತು ,
                                        ನೆರಳಿಗೊಂದು ಬಣ್ಣ
                                            ತುಂಬಿಸಲು ಬಂದ ಚಂದಿರ .......
                                 ಬಣ್ಣ ತೋಚದೆ ,ಖಾಲಿ ಕುಂಚಕೆ
                                              ನೆರಳು ಸವೆಯುತಿದೆ.....

ಬಣ್ಣಗಳಿಲ್ಲದ ಕಪ್ಪು ಬಿಳುಪು ಬದುಕು, ಬಣ್ಣ ಹಚ್ಚುವ , ಹಂಚುವ ದಿನಗಳು  ಸವೆದು ಹೋಗಿದ್ದವು ಕಾಲದ ಖಾಲಿ ಕುಂಚಕೆ.

                                               ನಿನ್ನೆಗಳಿಗೇಕೆ ಮೊನ್ನೆಗಳ  ಹಂಗು
                                                          ನಾಳೆಗಳ ಗುಂಗು......
                                               ಅದರಾಚೆಯ ಕನಸು
                                     ಇಂದೇ ಇತಿಹಾಸವಾಗುವ ಕನವರಿಕೆ.....

ನಿನ್ನೆ ಮೊನ್ನೆಗಳ ಜೊತೆ ಇಂದು ಕಳೆದುಹೋಗಿ ನಾಳೆ ಬರುತಿದ್ದೆ !!! ಕಳೆದು ಕೊಳ್ಳುತಿರುದು  ಬರೀ ಸಮಯವಲ್ಲ, ಒಂದು ಇಡೀ ಬದುಕು.

ಓ ..... ಗಾಳಿಗೆ ಮರಗಳು ಬೀಸುತಿತ್ತು, ಕೆಲವು ಕವಿತೆ ಸಾಲುಗಳು ಹಾಗೆ ತೇಲಿ ಬಂದವು,

                                       ನೀನು ಗಾಳಿ , ನಾನು ಮರ
                          ನೀ ಬೀಸಿದಂತೆ ನಾ ಬಾಗುವೆ.......
                ನಿನಗೆ  ಹೆದರಿ, ಎಲೆಗಳೆಲ್ಲ ಉದುರಿ
             ನಾ ಬೋಳಾದಾಗ ನೀ ಹಮ್ಮಿನಿಂದ  ಬೀಗುವೆ.....






ಹಾಗೆ ಸುಮ್ಮನೆ,
ಸುಕೇಶ್

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...