ಇಂದು ಮಳೆ ಕಾಡಿದೆ
ಅಂದಿನಂತೆ
ಮನಸು ನಿನ್ನ ಬೇಡಿದೆ
ಮತ್ತೆ ಮತ್ತೆ
ಒಲುಮೆ ಎದೆಯ ಬಾವಿಯ
ಒಂದು ಹನಿಗೆ
ಕೊರಳ ಗೂಡಿನಾಚೆಯ
ನಿನ್ನ ದನಿಗೆ ...........
ಹೃದಯ ಮತ್ತೆ ಕಾಡಿದೆ ,
ಅದು ನಿನಗೂ ಕೇಳದೆ ?
ಕೊಡೆಯ ಕೆಳಗಿನ ಭೂಮಿ
ಸೋಕಲು ಮಳೆ ಹನಿಗೂ ನಾಚಿಕೆ
ಅದರ ಒಳಗಿನ ನಮ್ಮ ಪಿಸುಮಾತಿಗೆ
ತಂಗಾಳಿಗು ಕನವರಿಕೆ ........
ಬೀಳೋ ಹನಿಗಳಿಗೆಲ್ಲ
ಕವಿತೆ ಬರೆಯ ಬಲ್ಲೆ ನಾನು ,
ಬೀಳೋ ಹನಿಗಳೆಲ್ಲ
ನೀನೆ ಆದರೆ.......||
ಇಂದು ಮತ್ತೆ ಮಳೆ ಕಾಡಿದೆ ಅಂದಿನಂತೆ
ಒಂಟಿ ಕೊಡೆ ಬೇಡಿದೆ ನಿನ್ನದೇ ಜೊತೆ

ಒಲುಮೆ ಎದೆಯ ಬಾವಿಯ
ಒಂದು ಹನಿಗೆ
ಕೊರಳ ಗೂಡಿನಾಚೆಯ
ನಿನ್ನ ದನಿಗೆ ...........
ಹೃದಯ ಮತ್ತೆ ಕಾಡಿದೆ ,
ಅದು ನಿನಗೂ ಕೇಳದೆ ?
ಕೊಡೆಯ ಕೆಳಗಿನ ಭೂಮಿ
ಸೋಕಲು ಮಳೆ ಹನಿಗೂ ನಾಚಿಕೆ
ಅದರ ಒಳಗಿನ ನಮ್ಮ ಪಿಸುಮಾತಿಗೆ
ತಂಗಾಳಿಗು ಕನವರಿಕೆ ........
ಬೀಳೋ ಹನಿಗಳಿಗೆಲ್ಲ
ಕವಿತೆ ಬರೆಯ ಬಲ್ಲೆ ನಾನು ,
ಬೀಳೋ ಹನಿಗಳೆಲ್ಲ
ನೀನೆ ಆದರೆ.......||
ಇಂದು ಮತ್ತೆ ಮಳೆ ಕಾಡಿದೆ ಅಂದಿನಂತೆ
ಒಂಟಿ ಕೊಡೆ ಬೇಡಿದೆ ನಿನ್ನದೇ ಜೊತೆ

Cute poem ... Reminded my old sweet memories
ReplyDelete