ಎಲ್ಲಿಗೆ ಹಕ್ಕಿ ಪಯಣ
ಯಾವುದದು ಗಮ್ಯ ತಾಣ ?
ಇಲ್ಲಿಗಿಂತ ಅಲ್ಲಿ ಚೆನ್ನವೆ ,
ಅಲ್ಲಿ ಕೂಡ ಆಕಾಶ ನೀಲಿ ಬಣ್ಣವೆ
ಅಲ್ಲಿ ಯಾರು ಜೊತೆ
ಅಲ್ಲಿದ್ದೇನು ಭಾಷೆ,ಏನು ಕಥೆ.
ಕನಸ ಮಾರುವವರು, ಕೊಳ್ಳುವವರು
ನಿನ್ನೆ ಇಲ್ಲಿಯ ಗೂಡು,
ಅದರೊಳಗಿನ ಸಂಸಾರ
ಕಳಚಿತೇ ನಂಟು ಅಷ್ಟು ಬೇಗ
ಮರೆತು ಹೋದಂತೆ ಜೊತೆಗೆ ಕಲಿತ ರಾಗ !!!
ನಿನ್ನೆ ಅಲ್ಲಿ, ಇಂದು ಇಲ್ಲಿ
ನಾಳೆ ಎಲ್ಲಿ.........
ಪತ್ತೇದಾರಿ ಮನಸು ಪ್ರಶ್ನೆ ಕೇಳುತ್ತದೆ .
ಹಕ್ಕಿ ಉತ್ತರ ಹುಡುಕಲು ಎಲ್ಲಿಗೋ ಹಾರಿ ಹೋಗುತ್ತದೆ .
ಇಲ್ಲಿ ಸ್ಥಿರವಲ್ಲ, ಅಲ್ಲಿ ನಮ್ಮದಲ್ಲ
ಇಲ್ಲಿಂದ ಅಲ್ಲಿಗೆ ಹಾರುತ್ತಿರ ಬೇಕು
ಇಲ್ಲಿ ಅಲ್ಲದಿದ್ದರೆ ಅಲ್ಲಿ ಬದುಕ ಕಟ್ಟಲು
ಪಯಣದ ಗುರಿಯ ಮುಟ್ಟಲು !!!
No comments:
Post a Comment